Wednesday, June 27, 2007

ಅಯ್ಯೋ ರಸಂ ಅಲ್ಲ ಸಾರು!

ನನ್ನ ಚಿಕ್ಕಂದಿನಿಂದ ನನಗೆ ಪರಿಚಯವಿರುವ ಹಲವಾರು ಹೆಸರುಗಳು ಇತ್ತೀಚೆಗೆ ಕಣ್ಮರೆಯಾಗುತ್ತಿರುವಂತೆ ತೋರುತ್ತಿದೆ. ನನ್ನ ಬಾಲ್ಯದಲ್ಲಿ mummy/daddy ಒಂದನ್ನು ಬಿಟ್ಟರೆ, ಸುಮಾರಾಗಿ ಬೇರೆ ಎಲ್ಲಾ ನಾಮಪದಗಳೂ ಕನ್ನಡದಲ್ಲಿ ಸರಳವಾಗಿ ಜನರ ಬಾಯಲ್ಲಿ ವಾಸವಾಗಿದ್ದವು.

ಆದರೆ, ಈವಾಗ ಎಲ್ಲವೂ ತಮಿಳುಕರಣ ಆಗಿಹೋದಹಾಗೆ ಇದೆ. ಉದಾಹರಣೆಗಳು.

ನಮ್ಮ ಮನೆಯಲ್ಲಿ ಅಚ್ಚುಕಟ್ಟಾಗಿ ಅನ್ನ, ಹುಳಿ, ಸಾರು, ಪಲ್ಯ, ಮೊಸರನ್ನ ಊಟ ಮಾಡುತ್ತಿದ್ದ ನನಗೆ ಈಗ ಜನರ ಬಾಯಲ್ಲಿ rice, ಸಾಂಬಾರ್, ರಸಂ, curd rice ಹಾಯಾಗಿ ಹೊರಳಾಡುವುದು ನೋಡಿದರೆ, light ಆಗಿ ಮೈ ಪರಚಿಕೊಳ್ಳುವ ಹಾಗೆ ಆಗುತ್ತದೆ. ಹುಗ್ಗಿ ಮತ್ತು ಹುಣಸೆಹಣ್ಣಿನ ಗೊಜ್ಜನ್ನು ಈವಾಗ ಪೊಂಗಲ್/ಚಟ್ನಿ ಪಕ್ಕಕ್ಕೆ ತಳ್ಳಿದೆ. ಹೋಟೇಲುಗಳಿಗೆ ಹೋದಾಗ ಬಿಸಿ ಬೇಳೆ ಭಾತ್ ಹುಡುಕಿದರೆ ಕಾಣುವುದು "ಬಿಸಿ ಬೇಲ ಬಾತ್". ಅದರ ಹೆಸರು ಆ ರೂಪದಲ್ಲಿ ಇದ್ದಾಗ ಹೊಟ್ಟೆಗೆ ಇಳಿಯುವುದು ಕಷ್ಟ. ನನ್ನ ಪ್ರಿಯವಾದ ದೋಸೆ "ದೋಸಾ".

ಇಷ್ಟೇಕೆ. ರಾಮನಗರ ರಾಮನಗರಂ ಆಗಿದೆ. ನೂರಾರು ಬಾರಿ ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಬಂದಾಗ ಕಾಣುತ್ತಿದ್ದ ಊರು ಮಾಯ! ಬೆಂಗಳೂರಿನ ಬನ್ನೇರುಘಟ್ಟ/ಬನ್ನೇರ್ಘಟ್ಟ ಇಂದು ಬನ್ನರ್ಗಟ್ಟ (ಇಂಗ್ಲೀಶಿನಲ್ಲಿ Bannargatta). ಹಲಸೂರು ಯಾವಾಗಲೋ ಅಲಸೂರಾಯಿತು.

ದುರಂತವೇನೆಂದರೆ, ನಮ್ಮ ಜನಕ್ಕೂ ಇವೆಲ್ಲ ಬೇಡವಾದ ವಿಶಯಗಳು. ಪರರು ನಮ್ಮತನವನ್ನು ಪಕ್ಕಕ್ಕೆ ತಳ್ಳಿ ಅವರ ಹೆಸರುಗಳನ್ನು ನಾಮಕರಣ ಮಾಡಿದಾಗಲೂ ಅಕ್ಷತೆ ಕಾಳನ್ನು ಚಿಮುಕಿಸುವ ಜನ ನಾವು!

5 Comments:

Anonymous Anonymous said...

G3S ..Correct aagi helidhree
Yeega namakaraNam haagu Grihapravesham aagi hogidhe .
Nanna Annana magaLu yeega HAL MaraTha halliyalli vaasa .avaLu nanage kaLisidha mail nalli ..namakaraNam haagu Grihapravesham nodi thale chachi koLLuva haage aayithu.

-DG

July 10, 2007 at 11:40 AM  
Blogger YSK said...

DG, idakke naave hoNe alva. adyeno tamiLu hesarugaLannu haakidare hecchu gaarike.

July 10, 2007 at 8:43 PM  
Anonymous Anonymous said...

i've lost count of the number of times I've corrected my friends (K and non-K) "that's not rasam. that's 'saaru'". huggi becoming 'pongal' is tragic. and the worst part is, 'pongal', 'cuRRy', 'rasam' etc., are poor cousins of the pristine originals.

May 26, 2009 at 1:24 PM  
Blogger Regi. said...

ನಮ್ಮ ತಪ್ಪಿಗೆ ನಾವೇ ಹೊಣೆ. “ಕನ್ನಡಕ್ಕಾಗಿ ಹೋರಾಟ” ಆದರೆ ನಮ್ಮ ಮಕ್ಕಳು ಮಾತ್ರ ಇಂಗ್ಲೀಷ್ ಶಾಲೆಯಲ್ಲಿ. ಈ ಮನೋಭಾವನೆ ದೂರವಾಗುವವರೆಗೆ ಇದೇ ಪಾಡು.

January 14, 2011 at 2:38 AM  
Anonymous Kamala.M.S.Balu said...

I am one of the very few who would always talk in Kannada with one and all including strangers.The reason for this apathy is---"Kannadigas have negative pride"--this being V.Seetharamayya' uvacha during the 1960s. Also even a vegetable vender from Tamilnadu buys & reads Tamil news paper. Do we?Take a look at the Bengalees living in U.S.A.You will realise why Kannada is nowhere to be found in Karnataka itself.also we are great in discouraging outsiders in learning our language.We would rather speak the other persons language,than teach them
I am sounding too harsh but that is the reality.lots and lots of Kannada words are getting lost because of non usage.Let us all think of ways to save the situation
I am learning to write in baraha script.So for the time being please excuse me for my opinion in English
Kamala Balu,Retd Announcer,
All India Radio, Bengaluru.

September 16, 2012 at 3:45 AM  

Post a Comment

<< Home